ಮೈಸೂರು ಅರಮನೆ
ಮೈಸೂರು ಅರಮನೆ ಈ ಅರಮನೆಗೆ ಇನೊಂದು ಹೆಸರು ಇದೆ ಅದೇ ಅಂಬಾ ವಿಲಾಸ್ ಅರಮನೆ , ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ ಇದು, ಮೈಸೂರನ್ನ "ಅರಮನೆಗಳ ನಗರ" ಎಂದೇ ಕರೀತಾರೆ , ಈ ಅರಮನೆ ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು.
ಮೈಸೂರು ಸಂಸ್ಥಾನ 1399 ರಿಂದ 1947 ರ ಭಾರತದ ಸ್ವಾತಂತ್ರ್ಯದ ವರೆಗೂ 'ಒಡೆಯರ್ ವಂಶದ ಅರಸ'ರಿಂದ ಆಳಲ್ಪಟ್ಟಿತು , ಆದರೆ ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ತಾನೆ , ನಂತರ 1782ರಲ್ಲಿ ಅವರು ಸವಾಂಪ್ತಾರೆ . ನಂತರ ಅವನ ಮಗ ಟಿಪ್ಪೂ ಸುಲ್ತಾನನು ಸಂಸ್ಥಾನದ ಸರ್ವಾಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ತಾನೆ , ನಂಜರಾಜರು, ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿ ಶ್ರೀರಂಗಪಟ್ಟಣದಲ್ಲಿರ್ತರೆ , 1799 ರಲ್ಲಿ ಟಿಪ್ಪು ಸುಲ್ತಾನ್ ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರ್ಥರೇ
ಒಡೆಯರ್ ಅರಸರು 14 ನೆಯ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ 1638 ರಲ್ಲಿ ಸಿಡಿಲು ಹೊಡೆದು ಸ್ವಲ್ಪಭಾಗ ಹಾಳಾಗುತ್ತೆ . ಆಗ ಇದನ್ನು ರಿಪೇರಿ ಮಾಡಿ ಸರಿಮಾಡಿತಾರೆ , ಆದರೆ 18 ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ 1793 ರಲ್ಲಿ ಟೀಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಿ 1803 ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಗುತ್ತೆ . ಈ ಅರಮನೆ ಸಹ 1897 ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಗಿಬಿಡುತ್ತೆ , ನಂತರ ಅರಮನೆ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತಗೊಳ್ಳುತ್ತಾರೆ. ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಕಮಾಡಿತಾರೆ . ವಿವಿಧ ರೀತಿಯ ವಾಸ್ತುಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸುತಾರೆ . ನಂತರ 1912 ರಲ್ಲಿ ಅರಮನೆಯ ಕೆಲಸ ಪೂರ್ತಿಯಾಗುತ್ತೆ
1799 ರಲ್ಲಿ ಟಿಪ್ಪು ಸುಲ್ತಾನ್ ಮರಣಹೊಂದಿದ ನಂತರ ಈ ಸಂಸ್ಥಾನದ ಆಡಳಿತವನ್ನು ಮುಂದುವರೆಸೋದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರು ಇರ್ತರೆ ಆದ್ರೆ ಇವರ ವಯಸು ಕೇವಲ 5 ವರ್ಷ ವಾಗಿರುತ್ತೆ ಇವರು ಪೂರ್ತಿ ಆಡಳಿತವನ್ನು ತಮ್ಮ ಕೆಯ್ಗೆತೆಗೆದುಕೊಳೋದಕ್ಕೆ 10 ವರ್ಷ ಸಮಯಬೇಕಾಗುತ್ತೆ ಆದ್ರೆ 1810 ರಲ್ಲಿ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟು ಕೊಡಬೇಕಾಗುತ್ತೆ 1940 ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗು ,ನಂತರವೂ ಜಯಚಾಮರಾಜ ಒಡೆಯರು ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸುತಾರೆ
ಈ ರೀತಿ ಮೈಸೂರು ಸಂಸ್ಥಾನವನ್ನು
27 ಒಡೆಯರು ವಂಶದ ರಾಜರು ರಾಜ್ಯಾಡಳಿತವನ್ನು ಮಾಡತಾರೆ ಮದ್ಯದಲ್ಲಿ ಹೈದರಾಲಿ ಮತ್ತು ಅವರ ಮಗನಾದ ಟಿಪ್ಪು ಸುಲ್ತಾನ್ ಕೂಡ ರಾಜ್ಯಾಡಳಿತವನ್ನು ಮಾಡತಾರೆ ಇನ್ನು ಅರಮನೆಯ ವಿಷಯಕ್ಕೆ ಬಂದರೆ
ಅರಮನೆಯ ವಾಸ್ತುಕಲೆಯ ಶೈಲಿಯನ್ನು "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತ , ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ, ಕಲ್ಲಿನಲ್ಲಿ ಕಟ್ಟಲಾಗಿರುವ ಈ ಅರಮನೆಯಲ್ಲಿ ಮೂರು ಮಹಡಿಗಳಿವೇ , ಕೆಂಪು ಅಮೃತಶಿಲೆಯ ಕಂಬಗಳು , 145 ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಈ ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ಅದ್ಭುತವಾದ ದೊಡ್ಡ ಉದ್ಯಾನವಿದೆ ರಾತ್ರಿ ಸಮಯದಲ್ಲಿ ಈ ಅರಮನೆಗೆ ಮಾಡಿರುವ ದೀಪಾಲಂಕಾರದಿಂದ ನೋಡೋದಕ್ಕೆ ಬಂಗಾರದ ಗುಡಿಯಂತಿರುತ್ತೆ
ಅರಮನೆಯ ಆವರಣದಲ್ಲಿ 12 ದೇವಸ್ಥಾನಗಳಿವೆ , ಅವುಗಳಲ್ಲಿ ಪ್ರಸಿದ್ಧವಾದ ದೇವಸ್ಥಾನಗಳೆಂದರೆ
14 ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನ ಕೂಡ ಇಲ್ಲಿ ಇದೆ
ಮುಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ ಅಂದ್ರೆ "ದಿವಾನ್-ಎ-ಖಾಸ್" ಇದನ್ನ ಮೈಸೂರು ಅರಮನೆಯಲ್ಲಿಯೂ ಬಳಸಲಾಗಿದೆ, ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಭೇಟಿಯಾಗಲು ಈ ಕೋಣೆಯನ್ನು ಬಳಸುತಿದ್ದರು , ಇನ್ನು ಸಭೆ ನೆಡೆಸುತಿದ್ದ ಹಾಲ್ ಅನ್ನು "ದರ್ಬಾರ್ ಹಾಲ್" ಅಂತ ಕರೀತಾರೆ ಇಲ್ಲೇ ಜನರು ರಾಜರನ್ನು ನೋಡುತಿದರು ,
ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು. 14 ನೆಯ ಶತಮಾನದಲ್ಲಿ ಉಪಯೋಗಿಸುತಿದ್ದ ಖಡ್ಗ, ಸುರಗಿ, ವ್ಯಾಗ್ರನಖ ಮೊದಲಾದ ಆಯುಧಗಳಿಂದ ಹಿಡಿದು 20ನೆಯ ಶತಮಾನದ ಪಿಸ್ತೂಲುಗಳು, ಬಂದೂಕುಗಳು ಮೊದಲಾದವನ್ನು ಇಲ್ಲಿ ಕಾಣಬಹುದು.ಮುಖ್ಯವಾಗಿ, ಒಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸಿದ್ದ ಖಡ್ಗಗಳಲ್ಲಿ ಒಂದಾದ "ವಜ್ರಮುಷ್ಟಿ", ಹಾಗೂ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದು

- ಸೋಮೇಶ್ವರನ ದೇವಸ್ಥಾನ
- ಲಕ್ಶ್ಮೀರಮಣ ದೇವಸ್ಥಾನ
- ಆಂಜನೇಯಸ್ವಾಮಿ ದೇವಸ್ಥಾನ
- ಗಣೇಶ ದೇವಸ್ಥಾನ
- ಶ್ವೇತ ವರಾಹ ಸ್ವಾಮಿ ದೇವಸ್ಥಾನ